ಕಲ್ಲಡ್ಕದ ಪಿಲಿಗೆ 8ನೇ ವರ್ಷದ ಸಂಭ್ರಮ; ಆಮಂತ್ರಣ ಪತ್ರಿಕೆ ಬಿಡುಗಡೆ

  • 28 Sep 2026 04:07:47 PM

ಕಲ್ಲಡ್ಕ: ನಾಗರಾಜ್ ಕಲ್ಲಡ್ಕ ಅವರ ನೇತೃತ್ವದಲ್ಲಿ ಹಾಗೂ ಹೋಟೆಲ್‌ ಲಕ್ಷ್ಮೀಗಣೇಶ್ ಅವರ ಸಹಕಾರದೊಂದಿಗೆ ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಆಯೋಜಿಸುತ್ತಿರುವ 8ನೇ ವರ್ಷದ ‘ಕಲ್ಲಡ್ಕದ ಪಿಲಿ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸೆ.25ರಂದು ಬಿಡುಗಡೆ ಮಾಡಲಾಯಿತು.

 

ಕಳೆದ ಏಳು ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ಸಾಂಪ್ರದಾಯಿಕ ದಸರಾ ಹುಲಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಸಂಘಟನೆ, ಈ ಬಾರಿಯೂ ಕಾರ್ಯಕ್ರಮವನ್ನು ಆಯೋಜಿಸಿದೆ. ಅಕ್ಟೋಬರ್ 18ರ ಭಾನುವಾರ ನಡೆಯಲಿರುವ 8ನೇ ವರ್ಷದ ಸಾಂಪ್ರದಾಯಿಕ ದಸರಾ ಹುಲಿಯ ಊದು ಪೂಜೆಯ ಆಮಂತ್ರಣ ಪತ್ರಿಕೆಯನ್ನು ಬಂಟ್ವಾಳದ ನಿತ್ಯಾನಂದ ನಗರದ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರದಲ್ಲಿ ದಿನೇಶ್ ಭಂಡಾರಿ ಬಿಡುಗಡೆಗೊಳಿಸಿದರು.

 

ಕಾರ್ಯಕ್ರಮದಲ್ಲಿ ನಾಗಸುಜ್ಞಾನ ಫ್ರೆಂಡ್ಸ್‌ನ ಪ್ರಮುಖರಾದ ಎನ್. ರಾಜೇಂದ್ರ ಹೊಳ್ಳ, ತಂಡದ ಸಂಸ್ಥಾಪಕ ನಾಗರಾಜ್ ಕಲ್ಲಡ್ಕ ಸೇರಿದಂತೆ ಸಂಘಟನೆಯ ಪ್ರಮುಖರು ಹಾಗೂ ಸದಸ್ಯರು ಉಪಸ್ಥಿತರಿದ್ದರು.